• SCHEMES FOR WOMEN DEVELOPMENT

  • SCHEMES FOR EX-DEVDASI EMPOWERMENT

  • SCHEMES FOR MOST VULNERABLE

  • ಸಂಕಷ್ಟದಲ್ಲಿರುವ ಮಹಿಳೆಯರಿಗೆ ಯೋಜನೆಗಳು

  • ಮಾಜಿ ದೇವದಾಸಿ ಮಹಿಳೆಯರಿಗೆ ಪುನರ್ವಸತಿ ಯೋಜನೆ

  • ಮಹಿಳೆಯರ ಅಭಿವೃದ್ಧಿಗೆ ಯೋಜನೆಗಳು

ಲೈಂಗಿಕ ಕಾರ್ಯಕರ್ತೆಯರ ಪುನರ್ವಸತಿ ಯೋಜನೆ :

ಶ್ರೀಮತಿ. ಶಬನಾ ಮಹ್ಮದ್ (37) (ಹೆಸರು ಬದಲಾಯಿಸಲಾಗಿದೆ) ಹಾಸನ ನಗರದಲ್ಲಿ ಗಂಡನೊಂದಿಗೆ ಬಟ್ಟೆ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇವರು 12ನೇ ವರ್ಷಕ್ಕೆ ಹಾಸನದ ಮಹ್ಮದ್ ಎಂಬುವರೊಂದಿಗೆ ಮದುವೆಯಾಗಿ, ಹಾಸನಕ್ಕೆ ಕಾಲಿಟ್ಟರು. ಹೆಸರಿಗೆ ಮಾತ್ರ ಗಂಡನಂತಿದ್ದ ಇವರು ಸಂಸಾರದ ನೊಗವನ್ನೆಲ್ಲಾ ಶಬನಾರ ಮೇಲೆ ಹಾಕಿದರು.

ಹೆಚ್ಚಿನ ಮಾಹಿತಿ…

ಜೀವನ ಚರಿತ್ರೆ

ಕೊಡಗು ಜೆಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಕುಶಾಲನಗರದ ಕಾಲೋನಿಯೊಂದರ ಬಡತನ ಕುಟುಂಬದಲ್ಲಿ ಜನಿಸಿದ ನಾನು ಲಿಂಗತ್ವ ಅಲ್ಪಸಂಖ್ಯಾತೆ. ನನ್ನ ಮೊದಲ ಹೆಸರು ಸುಶೀಲ್. ಹಾಸ್ಟೆಲ್ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ನನಗೆ 18 ವರ್ಷವಾಗುತ್ತಿದ್ದಂತೆ ನನ್ನ ಮನಸ್ಸಿನಲ್ಲಿ ಹೆಣ್ಣಿನ ಭಾವನೆಗಳು ಮೂಡತೊಡಗಿದವು. ಆಗ ನಾನು ಸಹನಾಳಾಗಿ ಬದಲಾದೆ.

ಹೆಚ್ಚಿನ ಮಾಹಿತಿ…

ಮಾಜಿ ದೇವದಾಸಿಯರ ಪುನರ್ವಸತಿ ಯೋಜನೆ

ಸಮಾಜದಲ್ಲಿ ಗೌರವ

ಶ್ರೀಮತಿ ಅನುಸೂಯಮ್ಮ ಎಂಬ ನಾನು ಕುರುಬ ಜಾತಿಗೆ ಸೇರಿದವಳು. ಒಂದು ಸಣ್ಣ ಕುರುಬರ ಹಟ್ಟಿ ಹಳ್ಳಿಯಲ್ಲಿ ವಾಸವಾಗಿದ್ದೇನೆ. ದೇವದಾಸಿ ಪದ್ಧತಿಯಿಂದ ಹೊರಬಂದು ಉತ್ತಮವಾದ ಜೀವನವನ್ನು ನಡಿಸಲು ಹಣಕಾಸಿನ ತೊಂದರೆ ಇತ್ತು. ಹಾಗಾಗಿ ದೇವದಾಸಿಯಾಗಿಯೇ ಬದುಕು ಮುಂದುವರಿಸಬೇಕಾಗಿತ್ತು. ಅಂತಹ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಯೋಜನೆಗಳ ಪ್ರಚಾರದಿಂದಾಗಿ ದೇವದಾಸಿ ಪುನರ್ವಸತಿ ಯೋಜನೆಯ ಮಾಹಿತಿ ಸಿಕ್ಕಿತು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ – ಚಿತ್ರದುರ್ಗದ ಮೂಲಕ 2012-13ನೇ ಸಾಲಿನಲ್ಲಿ ಸಾಲ ಸೌಲಭ್ಯವನ್ನು ಮತ್ತು ನಿಗಮವತಿಯಿಂದ ಸಹಾಯಧನವನ್ನು ಪಡೆದುಕೊಂಡು ಒಂದು ಕಿರಾಣಿ ಅಂಗಡಿಯನ್ನು ಪ್ರಾರಂಭಿಸಿದೆ.ಇದು ಈಗ ನನ್ನ ಜೀವನ ನಿರ್ವಹಣೆಗೆ ಸಹಕಾರಿಯಾಗಿದೆ. ಜೀವನ ಸುಧಾರಿಸಿದ್ದರಿಂದ ಸಮಾಜದಲ್ಲಿ ಗೌರವ ಸಿಗುವಂತಾಗಿದೆ. ಇದಕ್ಕೆ ಕಾರಣವಾದ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮಕ್ಕೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ.

nripenHome